January 27, 2017 by Mysore Vadiraj Article 0

A Small Article On Purandara Dasaru on his aradhane

A Small Article On Purandara Dasaru on his aradhane

Purandara Dasaru - Mysore Vadiraj articles                        *ಶ್ರೀ ಪುರಂದರದಾಸರು*

ಶ್ರೀಪುರಂದರದಾಸರ ಪುಣ್ಯದಿನ ಸ್ಮರಣೆ ನಿಮಿತ್ತ…

*ಮನ್ಮನೋಭೀಷ್ಟವರದಂ ಸರ್ವಾಭೀಷ್ಟ ಫಲಪ್ರದಮ್|*
*ಪುರಂದರಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಮ್||*

ಶ್ರೀ ಪುರಂದರದಾಸರು ಕನ್ನಡನಾಡು ಕಂಡ ಅಪ್ರತಿಮ ಧರ್ಮಪ್ರಸಾರಕರು. ಕನ್ನಡ ಭಾಷಗೆ ವಿಶಿಷ್ಟವಾದ ಗೇಯತೆಯನ್ನು ತಂದು ಕೊಟ್ಟ ಮಹಾ ಮಹಿಮರು.

ಶ್ರೀ ಪುರಂದರದಾಸರ ಮೂಲಸ್ಥಾನ ಪಂಢಪುರದ ಬಳಿಯ ಪುರಂದರಗಢ. ಪೂರ್ವಜೀವನದಲ್ಲಿ ಚಿನಿವಾರರಾಗಿದ್ದ ಇವರು ಅಪಾರ ಐಶ್ವರ್ಯವನ್ನು ಗಳಿಸಿದ್ದರು.  ನವ ಕೋಟಿನಾರಾಯಣ ಎಂಬ ಪ್ರಶಸ್ತಿಯಲ್ಲಿ ಅವರ ಅಗಾಧಸಂಪತ್ತಿನ ಹಿರಿಮೆಯನ್ನು ಕಾಣಬಹುದು. ಪೂರ್ವಜೀವನದಲ್ಲಿ ಜಿಪುಣಾಗ್ರೇಸರೆಂದು ಸುಪ್ರಸಿದ್ದರಾಗಿದ್ದ ಇವರು ಅನಂತರ ಸರ್ವಸ್ವವನ್ನು ದಾನ ಮಾಡಿ ದಾನಶೂರರೆನ್ನಿಸಿದ್ದು ವಿಶಿಷ್ಟ ದೈವಸಂಕಲ್ಪ.‌

ನವಕೋಟಿ ಎನ್ನಿಸಿದ ಮಹಾಲಕ್ಷ್ಮೀಯನ್ನು ತೊರೆದು ಅವಳ ಪತಿಯಾದ ನಾರಾಯಣನನ್ನು ಆರಾಧಿಸಿದ್ಹು ಇವರ ಅಮೋಘ ಸಾಧನೆ. ಕೇವಲ ಮಹಾಲಕ್ಷ್ಮೀಯ ಉಪಾಸನೆ ಅನರ್ಥಕ, ನಾರಾಯಣನ ಉಪಾಸನಯೇ ತಾರಕ ಎಂಬ ಭಗವದ್ಗೀತೆಯ ಹನ್ನೆರಡನೆಯ ಅಧ್ಯಾಯದ ನಿರೂಪಣೆಗೆ ಇವರ ಜೀವನ ನಿದರ್ಶನ.

ಪೂರ್ವಜೀವನದಲ್ಲಿ ಚಿನಿವಾರ ಸುರ್ವಣವ್ಯಾಪಾರಿಗಳಾಗಿದ್ದರೆ‌ ಅನಂತರದಲ್ಲಿ ಮಧ್ವಮತಪ್ರಸಾರಕರಲ್ಲಿ ಶಾಸ್ತ್ರಸುವರ್ಣದ ದಾನಶೂರ ರೆನ್ನಿಸಿದ್ದು ವಿಶೇಷ. ಅವರ ಇಂತಹ ಪರಿವರ್ತನೆಗೆ ಒಂದು ರೀತಿಯಲ್ಲಿ ಅವರ ಧರ್ಮಪತ್ನಿ ಸರಸ್ವತೀಬಾಯಿಯ ಧರ್ಮಶ್ರದ್ದೆ ಕಾರಣವಾಯಿತು ಇದರ ಸ್ಮರಣೆಗೆಂಬಂತೆ *ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ* ಎಂದು ಅವರು ಅನಂತರ ಹಾಡಿದರು. ಪತಿಯು ಸನ್ಮಾರ್ಗ ಹಿಡಿಯಲು ಪತ್ನಿ ವಹಿಸಬೇಕಾದ ಎಚ್ಚರಿಕೆಯನ್ನು ಸರಸ್ವತೀಬಾಯಿಯ ಪ್ರಸಂಗ ಸ್ತ್ರೀ ಕುಲಕ್ಕೆ ನೀಡಿದೆ.

ಶ್ರೀ ವ್ಯಾಸರಾಜರಂತಹ ವಿದ್ವನ್ನಣಿಗಳ ಸಂಪರ್ಕ ಇವರನ್ನು ಮಧ್ವಸಿದ್ದಾಂತದ ವಿಶ್ವರೂಪದರ್ಶನಕ್ಕೆ ಅಣಿಯಾಗಿಸಿತು. *ಮಧ್ವಮತದ ಸಿದ್ದಾಂತ ಪದ್ದತಿ ಬಿಡಬೇಡಿ ಬಿಟ್ಟು ಕೆಡಬೇಡಿ* ಎಂಬ ಇವರ ಸಂದೇಶ ಜಿಜ್ಞಾಸುಗಳ ಪಾಲಿಗೆ ಅಮೃತಧಾರೆ.

ವಿಜಯನಗರವೆನ್ನಿಸಿದ ಹಂಪೆ ಇವರ ಹರಿದಾಸ ಜೀವನ ಮುಖ್ಯ ಕಾರ್ಯಕ್ಷೇತ್ರ ದಶಕಗಳ ಕಾಲದ ಸಂಪರ್ಕ ಇವರನ್ನು ವಿಜಯನಗರದ ಹರಿದಾಸರೆಂದೇ ಗುರುತಿಸುವಂತೆ ಮಾಡಿದೆ

ಪುರಂದರದಾಸರ ದೇಶ ಸಂಚಾರದ ವೈಖರಿಯೂ ಆಗಾಧವಾದುದು ಸಮಗ್ರ ಭರತಖಂಡವನ್ನೇ ಅವರು ಸಂಚರಿಸಿದ್ದುದಕ್ಕೆ ಅವರ ಕೃತಿಗಳಲ್ಲಿ ಸಾಕ್ಷ್ಯ ದೊರೆಯುತ್ತದೆ ಅವರ ಸಂಚಾರ ಕೇವಲ ತೀರ್ಥದರ್ಶನ ವಾಗದೇ ತೀರ್ಥಮಹಿಮೆಯ ಪ್ರಸಾರ ಕಾರ್ಯವೂ ಅಗಿ ಜ್ಞಾನಕಾರ್ಯವೆನ್ನಿಸಿತು. ಅಪಾರ ಸಂಖ್ಯೆಯಲ್ಲಿ ತೀರ್ಥಕ್ಷೇತ್ರಗಳ ಮಹಿಮೆಯನ್ನು ಕುರಿತು ಅವರ ರಚಿಸಿರುವ ಕೃತಿಗಳು ಒಂದರ್ಥದಲ್ಲಿ ಕನ್ನಡ ತೀರ್ಥಪ್ರಬಂಧದಂತೆ ಮಾನ್ಯವಾಗಿದೆ.

*ಶ್ರೀಮಧ್ವೇಶಾರ್ಪಣಮಸ್ತು*

*ಶ್ರೀಹರಿಃ ಸರ್ವೋತ್ತಮಃ ಶ್ರೀವಾಯುಜೀವೋತ್ತಮಃ

Details on English:
Purandara Dasa was born to a pawn broker named Varadappa Nayaka. Varadappa Nayaka and his wife Lakshmi Bai had been childless for several years, and finally, after praying to Lord Srinivasa of Tirupati, they became proud parents of a child whom they called Srinivasa. The family are supposed to have hailed from Pandarapur in modern day Maharashtra but Purandara Dasa lived in Hampi during the latter part of his life.
Srinivasa Nayaka grew up and entered his father’s business. However, unlike his father, he was a miser, so much so that it is said that he even baulked at spending money on treatment for his father’s illness. His wife Saraswathi bai was the opposite, always wishing to contribute to charity much to the displeasure of her husband.

One day, Lord Vishnu in the guise of a poor priest visited Srinivasa Nayaka’s shop who wanted some alms to perform the thread ceremony for his son. Srinivasa Nayaka, being a miser, asked him to return the following day, and kept the Brahmin coming for another six months. Finally, fed up with the Brahmin’s persistence, he gave him one fake coin that he played with as a child. Vishnu as the priest then told Srinivasa’s wife Saraswathi the pitiful story of how a miserly pawnbroker made him come to his shop every day for six months only to give him a fake coin in the end. Saraswathi’s heart melted and she gave the Brahmin her nose ring as alms (a gift from her parents and thus not something that she got from her husband). The Brahmin promptly took the nose ring back to Srinivasa Nayaka’s shop, where he wanted to pawn it for money. The pawnbroker recognized it, however, so he locked it up in his safe and hurried home. He demanded that Saraswathi produce her nose ring immediately. Struck with fear, Saraswathi locked herself in the kitchen and tried to swallow poison. Miraculously, the nose ring dropped from the heavens into her cup of poison and she was able to produce it for her husband. Upon returning to his shop, he opened the safe, only to find that the nose ring in the safe had vanished. This put his mind into a turmoil. After deep thought, he came to the conclusion that the brahmin was none other than Lord Shri Purandara Vitthala Himself. He recalled all the incidents that had transpired in the previous six months. Wonderstruck, he was ashamed of his miserliness, Srinivasa Nayaka decided to renounce all material belongings and become a dasa (servant)of god. Thus, Srinivasa Nayaka came to be Purandara Dasa. In gratitude for this event, he would later compose a song dedicated to his wife, for having shown him the path to God. From that day onwards he became a devotee of Shri Hari. The once Navkoti Narayana became a Narayana bhakta, the hands which sported gold and diamond rings now played the tamboora, the neck which used to be resplendent with golden chains now housed the tulasi mAla. The man who had turned away countless people away, now himself went around collecting alms and living the life of a mendicant. The Nayaka who would have lived and died an inconsequential life became the Great Purandaradasa, loved and revered even centuries after his death.
??

A small link of Sri Purandara Dasa krithis sung by Dr Mangalapalli Balamurlikrishna?

Proffessional Mridangam Artiste, Online Mridangam Trainer.

Leave a Comment!

Your email address will not be published. Required fields are marked *